Monday, January 29, 2018

ಶುದ್ಧಿ

ಮಲಿನವೋ ಎಲ್ಲೆಲ್ಲೂ ಮಲಿನವೋ
ಭೂಮಿಯ ಮೈಯೆಲ್ಲಾ ಮಲಿನವೋ

ಎಲ್ಲೆಂದರಲ್ಲಿ ಕಸವ ಬಿಸಾಡಿ
ಗುಟ್ಕಾ, ಬೀಡಾ ಜಗಿದು ಉಗಿದು
ಪೇಪರ್, ಪ್ಲಾಸ್ಟಿಕ್, ಸಿಗರೇಟ್, ಬೀಡಿ
ಹೋಯಿತು ಇಳೆಯ ಕತೆ ಮುಗಿದು.

ಕರ ಕಟ್ಟುವೆನೆಂದು ಕಸವನ್ನೆಸೆದರೆ
ಕಸ ಕರಗುವುದೇ ಕಲ್ಲು ಸಕ್ಕರೆಯಂತೆ?
ಶುದ್ಧಿಯ ಮೌಲ್ಯ ಅರಿಯದೆ ಹೋದರೆ
ಸ್ವಾಸ್ಥ್ಯದ ಮೇಲಿನ ಪ್ರಹಾರವಂತೆ.

ಶುಚಿತ್ವವೇ ದೈವತ್ವದ ಮೂಲ
ಶೌಚವಿಲ್ಲದ್ದು ರೋಗದ ಜಾಲ
ಶುಭ್ರತೆಗೆ ಮೀರಿದ ಅಂದವಿಲ್ಲ
ರುಜಿನಕೆ ಇಲ್ಲಿ ಸ್ಥಳವಿಲ್ಲ

ಶುದ್ಧಿಯು ಏಲ್ಲೆಡೆ ಪಸರಲಿ
ಅಂತರಂಗದಿ ಬೆಳಗಲಿ
ಬಹಿರಂಗಕೂ ಹರಡಲಿ
ಹೊಸ ದಿಗಂತಕನುವಾಗಲಿ.

No comments:

Post a Comment