ಕೊರೆಯುವ ಚಳಿಯಲ್ಲಿ ಬೆಚ್ಚನೆ ಹೊದ್ದು
ಸುಖನಿದ್ರೆಯ ಸವಿಗನಸನು ಕಂಡು
ಇನ್ನೇನು ಬರಬೇಕು ಗೊರಕೆಯ ಸದ್ದು
ಕಾಲ ಬಳಿ ಕುಳಿತಿತ್ತೊಂದು ಕರಿನೆರಳು
ಕತ್ತಲ ಕೋಣೆಯಲಿ ಮಂಪರ ಮತ್ತಿನಲಿ
ಭಾರವಾದ ರೆಪ್ಪೆಗಳ ತೆರೆಯುತ್ತ
ಪಿಳಿಪಿಳಿ ನೋಡುತ್ತ ಕಣ್ಬಿಟ್ಟ
ಆ ಮನೆಯ ಏಕಾಂಗಿ ಬ್ರಹ್ಮಚಾರಿ
ಮುಂದಿದ್ದ ಆಕೃತಿಯ ಕಂಡದ್ದೆ
ಝಲ್ಲೆಂತು ಅವನೆದೆಯು
ಕಲ್ಲಂತೆ ಕುಳಿತಿದ್ದಲ್ಲೇ
ಮೆಲ್ಲನೆ ನಕ್ಕಿತು ಆ ಹೆಣ್ಣುಧ್ವನಿ
ಪಕ್ಕದಲ್ಲೇ ಇದ್ದ ಬತ್ತಿಯ ಹಚ್ಚಿ
ಮಂದಬೆಳಕಿನಲಿ ಮಧ್ಯರಾತ್ರಿಯಲಿ
ಮೆಲ್ಲನೆದ್ದು ಅವಳ ಬಳಿ ಸರಿದು
ನೋಡಲು ಮುಖವೆಲ್ಲ ಮುಚ್ಚಿದ್ದ ಕೇಶರಾಶಿ
ನಡುಗುತ್ತಲೆ ಕೈಯಿಂದ
ಅವಳ ಕೂದಲ ಸರಿಸಲು
ಅಪ್ರತಿಮ ಸುಂದರಿ ಅವಳು
ಅವನ ನೋಡಿ ಮುಗುಳ್ನಕ್ಕಳು
ಭಯದಲ್ಲಿ ಅದುರುತ್ತಿದ್ದವನಿಗೆ
ಸಿಹಿಮುತ್ತು ಕೊಡುವ ನೆಪದಲ್ಲಿ
ಬರಸೆಳೆದು ಬಿಗಿದಪ್ಪಿ ತುಟಿಗಳ ಬಂಧಿಸಿ
ಚುಂಬಿಸುತ್ತಾ ಕಚ್ಚಿ ಕಿತ್ತೆಸೆದು ಗಹಗಹಿಸಿದಳು.
No comments:
Post a Comment